Keshava nama lyrics in Kannada | Hanuma Bheema Madhwa

Check here for Sri Kanaka Dasa virachitha Keshava Nama in Kannada Lyrics. This is the most chanted song by Lord Krishna devotees and Madhva Followers.

Keshava nama lyrics in Kannada | Hanuma Bheema Madhwa

Keshava nama lyrics in Kannada | Hanuma Bheema Madhwa


ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು

ದೋಶರಾಶಿ ನಾಶಮಾಡು ಶ್ರೀಶ ಕೇಶವ ||


ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ |

ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||೧||


ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ||

ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ ||೨||


ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ ||

ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ ||೩||


ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ ||

ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ ||೪||


ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ ||

ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ ||೫||


ಕವಿದುಕೊಂಡು ಇರುವ ಪಾಪ | ಸವೆದು ಪೋಗುವಂತೆ ಮಾಡಿ ||

ಜವನ ಬಾಧೆಯನ್ನು ಬಿಡಿಸೋ | ಶ್ರೀತ್ರಿವಿಕ್ರಮ ||೬||


ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ ||

ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ||೭||


ಮೊದಲು ನಿನ್ನ ಪಾದಪೂಜೆ | ಒದಗುವಂತೆ ಮಾಡೋ ಎನ್ನ ||

ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ ||೮||


ಹುಸಿಯನಾಡಿ ಹೊಟ್ಟೆ ಹೊರೆವ | ವಿಷಯದಲ್ಲಿ ರಸಿಕನೆಂದು ||

ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ ||೯||


ಕಾಮಕ್ರೋಧ ಬಿಡಿಸಿ ನಿನ್ನ | ನಾಮ ಜಿಹ್ವೆಯೊಳಗೆ ನುಡಿಸು ||

ಶ್ರೀಮಹಾನುಭಾವನಾದ ದಾಮೋದರ ||೧೦||


ಬಿದ್ದು ಭವದನೇಕ ಜನುಮ | ಬದ್ದನಾಗಿ ಕಲುಷದಿಂದ ||

ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ ||೧೧||


ಪಂಕಜಾಕ್ಷ ನೀನೆ ಎನ್ನ | ಮಂಕುಬುದ್ಧಿಯನ್ನು ಬಿಡಿಸಿ |

ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ ||೧೨||


ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು ||

ಘಾಸಿ ಮಾಡದಿರು ಇನ್ನು ವಾಸುದೇವನೇ ||೧೩||


ಬುದ್ಧಿ ಶೂನ್ಯನಾಗಿ ಎನ್ನ | ಬದ್ಧಕಾಯ ಕುಹಕ ಮನವ ||

ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ ||೧೪||


ಜನನಿ ಜನಕ ನೀನೆಯೆಂದು | ನೆನೆವೆನಯ್ಯ ದೀನಬಂಧು ||

ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ ||೧೫||


ಹರುಶದಿಂದ ನಿನ್ನ ನಾಮ | ಸ್ಮರಿಸುವಂತೆ ಮಾಡು ಕ್ಷೇಮ ||

ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ ||೧೬||


ಸಾಧುಸಂಗ ಕೊಟ್ಟು ನಿನ್ನ | ಪಾದಭಜನೆ ಇತ್ತು ಎನ್ನ ||

ಭೇದಮಾಡಿ ನೋಡದಿರೊ ಹೇ ಅಧೋಕ್ಷಜ ||೧೭||


ಚಾರುಚರಣ ತೋರಿ ಎನಗೆ | ಪಾರುಗಾಣಿಸಯ್ಯ ಕೊನೆಗೆ ||

ಭಾರ ಹಾಕಿರುವೆ ನಿನಗೆ ನಾರಸಿಂಹನೇ ||೧೮||


ಸಂಚಿತಾದಿ ಪಾಪಗಳು | ಕಿಂಚಿತಾದ ಪೀಡೆಗಳನು ||

ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ ||೧೯||


ಜ್ಞಾನ ಭಕುತಿ ಕೊಟ್ಟು ನಿನ್ನ | ಧ್ಯಾನದಲ್ಲಿ ಇಟ್ಟು ಸದಾ ||

ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ ||೨೦||


ಜಪತಪಾನುಷ್ಠಾನವಿಲ್ಲ | ಕುಪಿತಗಾಮಿಯಾದ ಎನ್ನ ||

ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ ||೨೧||


ಮೊರೆಯ ಇಡುವೆನಯ್ಯ ನಿನಗೆ | ಶರಧಿಶಯನ ಶುಭಮತಿಯ||

ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ ||೨೨||


ಪುಟ್ಟಿಸಲೇಬೇಡ ಇನ್ನು | ಪುಟ್ಟಿಸಿದಕೆ ಪಾಲಿಸಿನ್ನು||

ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ ||೨೩||


ಸತ್ಯವಾದ ನಾಮಗಲನು | ನಿತ್ಯದಲ್ಲಿ ಪಠಿಸುವರಿಗೆ ||

ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ ||೨೪||


ಮರೆಯದಲೆ ಹರಿಯ ನಾಮ | ಬರೆದು ಓದಿ ಪೇಳ್ದವರಿಗೆ ||

ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ ||೨೫||




Comments

Popular posts from this blog

Sri Subrahmanya Ashtottara Shatanamavali in Telugu Lyrics Online free

Sri Yantrodharaka Hanuman Stotram Telugu Lyrics online free

Sri Subrahmanya Ashtottara Shatanamavali in Kannada