Sri Durga Suladi Lyrics in Kannada Online Free

See below for Sri Durga Suladi Lyrics in Kannada, Sri Vijaya Dasa Virachitha Durga Suladi, and Daily chanting of powerful stotra for Madhva.

Durga, meaning "Durgamma", is the most famous incarnation of the Goddess and one of the main forms of the Goddess Shakti in the Hindu pantheon. Durga's primitive form was the result of a combination of a mountain goddess worshiped by the inhabitants of the Himalayas and the Vindhyas, a goddess worshiped by the nomadic shepherd, a female plant spirit, and a war goddess. As her devotees progressed in civilization, the ancient goddess of war transformed into the all-destroying personification of Kali, the plant soul into the primordial power and savior from samsara, and she was gradually brought into the fold of Brahmanical mythology and philosophy. A symbol of courage and bravery. "Goddess Durge" or "Adi Parashakti" is one of the Hindu deities. 

Click here for Swarna Gowri Ashtottara in Kannada

Click here for Mysore Chamundeswari Devi Temple Online Booking

Durga Suladi Lyrics in Kannada


As per Sanathana Darma, Durga incarnated for the welfare of the world, to destroy the evil and demonic forces that threaten peace, prosperity and religion. Durga is also a fierce form of the protective mother goddess who unleashes her divine wrath against evil to liberate the oppressed and wreaks havoc to empower creation. Durga is depicted as a deity riding a lion or a tiger, armed with many weapons.

Declaring herself the creator of the universe, Durga is called Chandi Path. She has a significant following in the Indian states of West Bengal, Odisha, Jharkhand, Assam and Bihar, Bangladesh and Nepal. Durga is worshiped after the spring and autumn harvests, especially during the Navratri festival.

Sri Durga Suladi Lyrics in Kannada Online Free

ಧ್ರುವ ತಾಳ

ದುರ್ಗಾ ದುರ್ಗೆಯ ಮಹಾದುಷ್ಟಜನ ಸಂಹಾರೆ |

ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ |

ದುರ್ಗಮವಾಗಿದೆ ನಿನ್ನ ಮಹಿಮೆ ಭೊಮ್ಮ

ಭರ್ಗಾದಿಗಳಿಗೆಲ್ಲ ಗುಣಿಸಿದರೊ

ಸ್ವರ್ಗಭೂಮಿ ಪಾತಾಳ ಸಮಸ್ತ ವ್ಯಾಪುತ ದೆವಿ

ವರ್ಗಕ್ಕೆ ಮೀರಿದ ಬಲುಸುಂದರೀ

ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ

ದುರ್ಗತಿಹಾರೆ ನಾನು ಪೆಳುವುದೇನು

ದುರ್ಗಂಧವಾಗಿದೆ ಸಂಸ್ಕೃತಿ ನೋಡಿದರೆ

ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ

ದುರ್ಗೆ ಹೆ ದುರ್ಗೆ ಮಹಾದುರ್ಗೆ ಭೂದುರ್ಗೆ ವಿಷ್ಣು

ದುರ್ಗೆ ದುರ್ಜಯೆ ದುರ್ಧಕ್ಷೆ ಶಕ್ತಿ

ದುರ್ಗಕಾನನ ಗಹನ ಪರ್ವತ ಘೊರ ಸರ್ಪ

ಗರ್ಗರ ಶಬ್ಧ ವ್ಯಾಘ್ರ ಕರಡಿ ಮೃತ್ಯು

ವರ್ಗ ಭೂತ ಪ್ರೇತ ಪೈಶಾಚಿ ವೊದಲಾದ

ದುರ್ಗಣ ಸಂಕಟ ಪ್ರಾಪ್ತವಾಗೆ

ದುರ್ಗಾದುರ್ಗೆ ಎಂದು ಉಚ್ಚಸ್ವರದಿಂದ

ನಿರ್ಗಳಿತನಾಗಿ ಒಮ್ಮೆ ಕೂಗಿದರೂ

ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರು

ಸುರ್ಗಣ ಜಯಜಯವೆಂದು ಪೊಗಳುತಿರೆ

ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೊತೆ

ನೀರ್ಗುಡಿದಂತೆ ಲೊಕ ಲೀಲೆ ನಿನಗೆ

ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ

ದುರ್ಗಾಶ್ರಯಮಾಡಿ ಬದುಕುವಂತೆ ಮಾಡು

ಮಟ್ಟ ತಾಳ

ಅರಿದರಾಂಕುಶ ಶಕ್ತಿ ಪರಶು ನೆಗಲಿಖಡ್ಗ

ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ

ವರ ಅಭಯ ಮುಸಲ ಪರಿ ಪರಿ ಆಯುಧವ

ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ

ಸರುವ ದೇವತೆಗಳ ಕರುಣಾಪಾಂಗದಲ್ಲಿ

ನಿರೀಕ್ಷಿಸಿ ಅವರವರ ಸ್ವರೂಪಸುಖ ಕೊಡುವ

ಸಿರಿಭೂಮಿ ದುರ್ಗಾ ಸರ್ವೊತ್ತಮ

ನಮ್ಮ ವಿಜಯ ವಿಠ್ಠಲನಂಘ್ರಿ

ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ || ೨ ||

ತ್ರಿವಿಡಿ ತಾಳ

ಸ್ತುತಿಮಾಡುವೆ ನಿನ್ನ ಕಾಳಿ ಮಹಾಕಾಳಿ ಉ

ನ್ನತಬಾಹು ಕರಾಳವದನೆ ಚಂದಿರಮುಖೆ

ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ

ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೆ ಭವ್ಯೆ

ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿಗಮನೆ ಅ

ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ

ಕ್ಷಿತಿಭಾರಹರಣೆ ಕ್ಷೀರಾಬ್ಧಿತನೆಯೆ ಸ

ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ

ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ

ಪ್ರತಿಕೂಲ ಭೆದೆ ಪೂರ್ಣ ಭೊಧೆ ರೌದ್ರೆ

ಅತಿಶಯರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ

ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ

ಘೃತ ಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು

ವ್ರತೆ ಪತಿವ್ರತೆ ತ್ರಿನೆತ್ರೆ ರಕ್ತಾಂಬರೆ

ಶತಪತ್ರನಯನೆ ನಿರುತ ಕನ್ಯೆ ಉದಯಾರ್ಕ

ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ

ಶ್ರುತಿತತಿ ನುತೆ ಶುಕ್ಲ ಶೋಣಿತ ರಹಿತೆ ಅ

ಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ

ಚತುರ ಕಪರ್ದಿಯೆ ಅಂಭ್ರಣಿ ಹ್ರೀ

ಉತ್ಪತಿ ಸ್ಥಿತಿಲಯ ಕರ್ತೆ ಶುಭ್ರಶೋಭನ ಮೂರ್ತೆ

ಪತಿತಪಾವನೆ ಧನ್ಯೆ ಸರ್ವೊಷಧಿಯಲಿದ್ದು

ಹತಮಾಡು ಕಾಡುವ ರೋಗಗಳಿಂದ

ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿ ಇತು

ಸತತ ಕಾಯಲಿ ಬೇಳು ದುರ್ಗೇ ದುರ್ಗೇ

ಚ್ಯುತದೂರ ವಿಜಯ ವಿಠ್ಠಲರೆಯನ ಪ್ರೀಯೆ

ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ ||೩||

ಅಟ್ಟ ತಾಳ

ಶ್ರೀ ಲಕ್ಷ್ಮೀ ಕಮಲಾ ಪದ್ಮಾಪದ್ಮಿನಿ ಕಮ

ಲಾಲಯೆ ರಮಾ ವೃಷಾಕಪಿ ಧನ್ಯವೃದ್ದಿ ವಿ-

ಶಾಲ ಯಜ್ಞಾ ಇಂದಿರೆ ಹಿರಣ್ಯ ಹರಿಣಿ

ವಾಲಯ ಸತ್ಯ ನಿತ್ಯಾನಂದ ತ್ರಯಿ ಸುಧಾ

ಶೀಲೆ ಸುಗಂಧ ಸುಂದರಿ ವಿದ್ಯಾ ಸುಶೀಲೆ

ಸುಲಕ್ಷಣ ದೇವಿ ನಾನಾ ರೂಪಗಳಿಂದ ಮೆರೆವ ಮೃತ್ಯುನಾಶೆ

ವಾಲಗಕೊಡು ಸಂತರ ಸನ್ನಿಧಿಯಲ್ಲಿ

ಕಾಲಕಾಲಕೆ ಎನ್ನ ಭಾರಪೊಹಿಸುವ ತಾಯಿ

ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು

ಕೇಳಿ ಕೇಳಿ ಬಂದೆ ಕೇವಲ ಈ ಮನ

ಘಾಳಿಯಂತೆ ಪರದ್ರವ್ಯಕ್ಕೆ ಪೋಪುದು

ಎಳಲ ಮಾಡದೆ ಉದ್ಧಾರ ಮಾಡುವ

ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ

ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ

ಪಾಲಸಾಗರ ಶಾಯಿ ವಿಜಯವಿಠಲನೊಳು

ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ ||೪||

ಆದಿ ತಾಳ

ಗೋಪಿನಂದನೆ ಮುಕ್ತೆ ದೈತ್ಯಸಂತತಿ ಸಂ

ತಾಪವ ಕೊಡುತಿಪ್ಪ ಮಹಾಕಠೊರ ಉಗ್ರ

ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ

ತಾಪತ್ರಯ ವಿನಾಶ ಓಂಕಾರೆ ಹೂಂಕಾರೆ

ಪಾಪಿಕಂಸಗೆ ಭಯ ತೊರಿದೆ ಬಾಲ ಲೀಲೆ

ವ್ಯಾಪುತ ಧರ್ಮ ಮಾರ್ಗ ಪ್ರೇರಣೆ ಅಪ್ರಾಕೃತೆ

ಸ್ವಪ್ನದಲಿ ನಿನ್ನ ನೆನೆಸಿದ ಶರಣನಿಗೆ

ಅಪಾರವಾಗಿದ್ದ ವಾರಿಧಿಯಂತೆ ಮಹಾ

ಆಪತ್ತುಬಂದಿರಲು ಹಾರಿ ಪೋಗೋವು ಸಪ್ತ

ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ

ವ್ಯಾಪಾರ ಮಾಡಿಸಿ ಭಕ್ತಜನಕೆ ಪುಣ್ಯ

ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ

ಪ್ರಾಪುತವಾಗಿ ಎನ್ನ ಮನದಲ್ಲಿ ನಿಂದು ದುಃಖ

ಕೂಪದಿಂದಲಿ ಎತ್ತಿ ಕಡೆಮಾಡು ಜನ್ಮಂಗಳು

ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ

ಆಪಾದ ಮೌಳಿತನಕ ಭಜಿಸಿ ಭವ್ಯರಾದರು

ನಾ ಪೆಳುವುದೇನು ಪಾಂಡವರ ಮನೋಭೀಷ್ಟೆ

ಈ ಪಾಂಚ ಭೌತಿಕದಲ್ಲಿ ಆವ ಸಾಧನ ಕಾಣೇ

ಶ್ರೀಪತಿ ನಾಮ್ವನ್ದೆ ಜಿಹ್ವಾಗ್ರಹದಲಿ ನೆನೆವ

ಔಪಾಸನ ಕೊಡು ರುದ್ರಾದಿಗಳ ವರದೇ

ತಾಪಸ ಜನ ಪ್ರೀಯ ವಿಜಯ ವಿಠ್ಠಲ ಮೂರ್ತಿಯ

ಶ್ರೀಪಾದಾರ್ಚನೆ ಮಾಳ್ವೇ ಶ್ರೀಭೂದುರ್ಗಾವರ್ಣಾಶ್ರಯೇ ||೫||

ಜತೆ

ದುರ್ಗೆ ಹಾ ಹೇ ಹೊ ಹಾ: ದುರ್ಗೆ ಮಂಗಳ ದುರ್ಗೆ

ದುರ್ಗತಿ ಕೊಡದಿರು ವಿಜಯವಿಠ್ಠಲಪ್ರೀಯೆ ||೬||


Comments

Popular posts from this blog

Sri Yantrodharaka Hanuman Stotram Telugu Lyrics online free

Sri Subrahmanya Ashtottara Shatanamavali in Telugu Lyrics Online free

Stuti Ratnamala | Bhanu Koti Teja Lavanya Moorthy Song Lyrics in Kannada