Madhwanama in Kannada Lyrics Online

See below for Madhwanama in Kannada Lyrics online free, Sri Sripadaraja Virachitha Madhwa nama in Kannada text with Phala Sthuthi.

Madhwanama is the most important stuthi for Madhwas, especially for women. This is daily chanting devaranama composed by the great and famous Madhva saint guru Sri Sripadarajaru. The Moola Brindavana of Sri Sripadarajaru is in Narasimha theertha, which is a very small area near Mulbagil Karnataka. As per Madhwa Sampradaya, Sri Sripadarajaru was an incarnation of Druva Rajaru. Sri Sripadarajaru was vidhya gurugalu to Sri Vyasarajaru. Sri Sripadarajaru composed many dasarapada and Teeka Tippani to Sarva Moola Granthas of Acharya Madhvaru. See below for Sri Sripadarajaru composed Madhwanama. 

Click here for Anantha Padmanabha Suladi Lyrics

Download our App to Contact Purohit directly 

Madhwanama in Kannada Lyrics Online

Madhwanama in Kannada Lyrics Online Free

ಶ್ರೀ ಶ್ರೀಪಾದರಾಜ ವಿರಚಿತ - ಮಧ್ವನಾಮ 

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ

ಅಖಿಲಗುಣ ಸದ್ಧಾಮ ಮಧ್ವನಾಮ || ಪ ||


ಆವ ಕಚ್ಛಪ ರೂಪದಿಂದಲಂಡೋದಕವ

ಓವಿ ಧರಿಸಿದ ಶೇಷಮೂರುತಿಯನು

ಆವವನ ಬಳಿವಿಡಿದು ಹರಿಯ ಸುರರೈಯ್ದುವರು

ಆ ವಾಯು ನಮ್ಮ ಕುಲಗುರುರಾಯನು || ೧ ||


ಆವವನು ದೇಹದೊಳಗಿರಲು ಹರಿ ನೆಲಸಿಹನು

ಆವವನು ತೊಲಗೆ ಹರಿ ತಾ ತೊಲಗುವ

ಆವವನು ದೇಹದಾ ಒಳ ಹೊರಗೆ ನಿಯಾಮಕನು

ಆ ವಾಯು ನಮ್ಮ ಕುಲಗುರುರಾಯನು || ೨ ||


ಕರುಣಾಭಿಮಾನಿ ಸುರರು ದೇಹವ ಬಿಡಲು

ಕುರುಡ ಕಿವುಡ ಮೂಕನೆಂದೆನಿಸುವ

ಪರಮ ಮುಖ್ಯ ಪ್ರಾಣ ತೊಲಗಲಾ ದೇಹವನು

ಅರಿತು ಪೆಣನೆಂದು ಪೇಳುವರು ಬುಧಜನ || ೩ ||


ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ

ಪರತರನೆನಿಸಿ ನಿಯಾಮಿಸಿ ನೆಲಸಿಹ

ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು

ಗುರುಕುಲತಿಲಕ ಮುಖ್ಯ ಪವಮಾನನು || ೪ ||


ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು

ವಾತಸುತ ಹನುಮಂತನೆಂದೆನಿಸಿದ

ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ

ಈತಗೆಣೆಯಾರು ಮೂಲೋಕದೊಳಗೆ || ೫ ||


ತರಣಿಗಭಿಮುಖನಾಗಿ ಶಬ್ದಶಾಸ್ತ್ರವ ಪಠಿಸಿ

ಉರವಣಿಸಿ ಹಿಂದುಮುಂದಾಗಿ ನಡೆದ

ಪರಮ ಪವಮಾನ ಸುತ ಉದಯಾಸ್ತ ಶೈಲಗಳ

ಭರದಿಯೈದಿದಗೀತಗುಪಮೆ ಉಂಟೇ || ೬ ||


ಅಖಿಲ ವೇದಗಳ ಸಾರ ಪಠಿಸಿದನು ಮುನ್ನಲ್ಲಿ

ನಿಖಿಳ ವ್ಯಾಕರಣಗಳ ಇವ ಪೇಳಿದ

ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದು

ಮುಖ್ಯಪ್ರಾಣನನು ರಾಮನನುಕರಿಸಿದ || ೭ ||


ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ

ಧರಣಿಸುತೆಯಳ ಕಂಡು ಧನುಜರೊಡನೆ

ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ

ಉರುಹಿ ಲಂಕೆಯ ಬಂದ ಹನುಮಂತನು || ೮ ||


ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ

ಶರಧಿಯನು ಕಟ್ಟಿ ಬಲು ರಕ್ಕಸರನು

ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ

ಮೆರೆದ ಹನುಮಂತ ಬಲವಂತ ಧೀರ || ೯ ||


ಉರಗಬಂಧಕೆ ಸಿಲುಕಿ ಕಪಿವರರು ಮೈಮರೆಯೆ

ತರಣಿಕುಲತಿಲಕನಾಜ್ಞೆಯ ತಾಳಿದ

ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ

ಹರಿವರಗೆ ಸರಿಯುಂಟೆ ಹನುಮಂತಗೆ || ೧೦ ||


ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ

ಭಜಿಸಿ ಮೌಕ್ತಿಕದ ಹಾರವನು ಪಡೆದ

ಅಜಪದವಿಯನು ರಾಮ ಕೊಡೆವೆನೆನೆ ಹನುಮಂತ

ನಿಜ ಭಕುತಿಯನೆ ಬೇಡಿ ವರವ ಪಡೆದ || ೧೧ ||


ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ

ಸೋಮಕುಲದಲಿ ಜನಿಸಿ ಪಾರ್ಥನೊಡನೆ

ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ

ಆ ಮಹಿಮ ನಮ್ಮ ಕುಲಗುರುರಾಯನು || ೧೨ ||


ಕರದಿಂದ ಶಿಶುಭಾವನಾದ ಭೀಮನ ಬಿಡಲು

ಗಿರವಡಿದು ಶತಶೃಂಗವೆಂದೆನಿತು

ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ

ಅರೆವ ವೀರರಿಗೆ ಸುರ ನರರು ಸರಿಯೇ || ೧೩ ||


ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ

ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ

ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ

ಧರಿಸಿ ಜಾಹ್ನವಿಗೊಯ್ದ ತನ್ನನುಜರ || ೧೪ ||


ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ

ನಿಲ್ಲದೊರಸಿದ ಲೋಕಕಂಟಕರನು

ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು

ಎಲ್ಲ ಸುಜನರಿಗೆ ಹರುಷವ ತೋರಿದ || ೧೫ ||


ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ

ರಾಜಸೂಯಾಗವನು ಮಾಡಿಸಿದನು

ಆಜಿಯೊಳು ಕೌರವರ ಬಲವ ಸವರುವೆನೆಂದು

ಮೂಜಗವರಿಯೆ ಕಂಕಣ ಕಟ್ಟಿದ || ೧೬ ||


ದಾನವರ ಸವರಬೇಕೆಂದು ಬ್ಯಾಗ

ಮಾನನಿಧಿ ದ್ರೌಪದಿಯ ಮನದಿಂಗಿತವನರಿತು

ಕಾನನವ ಪೊಕ್ಕು ಕಿಮ್ಮಾರಾದಿಗಳ ಮುರಿದು

ಮಾನಿನಿಗೆ ಸೌಗಂಧಿಕವನೆ ತಂದ || ೧೭ ||


ದುರುಳ ಕೀಚಕನು ತಾ ದ್ರೌಪದಿಯ ಚೆಲುವಿಕೆಗೆ

ಮರುಳಾಗಿ ಕರಕರಿಯ ಮಾಡಲವನಾ

ಗರಡಿ ಮನೆಯಲಿ ಬರಸಿ ಅವನನ್ವಯವ

ಕುರುಪನಟ್ಟಿದ ಮಲ್ಲಕುಲವ ಸದೆದ || ೧೮ ||


ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ

ಓರಂತೆ ಕೌರವನ ಮುರಿದು ಮೆರೆದ

ವೈರಿ ದುಶ್ಶಾಸನ್ನ ರಣದಲ್ಲಿ ಎಡಗೆಡಹಿ

ವೀರ ನರಹರಿಯ ಲೀಲೆಯ ತೋರಿದ || ೧೯ ||


ಗುರುಸುತನು ಸಂಗರದಿ ನಾರಾಯಣಾಸ್ತ್ರವನು

ಉರವಣಿಸಿ ಬಿಡಲು ಶಸ್ತ್ರವ ಬಿಸುಟರು

ಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಿಂ

ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ || ೨೦ ||


ಚಂಡ ವಿಕ್ರಮನು ಗದೆಗೊಂಡು ರಣದಿ ಭೂ

ಮಂಡಲದೊಳಿದಿರಾಂತ ಖಳರನೆಲ್ಲಾ

ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು

ಕಂಡು ನಿಲ್ಲುವರಾರು ತ್ರಿಭುವನದೊಳು || ೨೧ ||


ದಾನವರು ಕಲಿಯುಗದೊಳವತರಿಸಿ ವಿಬುಧರೊಳು

ವೇನನ ಮತವನರುಹಲದನರಿತು

ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ

ಮಾನನಿಧಿ ಮಧ್ವಾಖ್ಯನೆಂದೆನಿಸಿದ || ೨೨ ||


ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ

ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ

ಉರ್ವಿಯೊಳು ಮಾಯೆ ಬೀರಲು ತತ್ತ್ವಮಾರ್ಗವನು

ಓರ್ವ ಮಧ್ವಮುನಿ ತೋರ್ದ ಸುಜನರ್ಗೆ || ೨೩ ||


ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ

ದುರ್ವಾದಿಗಳ ಮತವ ನೆರೆ ಖಂಡಿಸಿ

ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದಾ

ಶರ್ವಾದಿ ಗೀರ್ವಾಣ ಸಂತತಿಯಲಿ || ೨೪ ||


ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ

ಪದಕೆರಗಿ ಅಖಿಳ ವೇದಾರ್ಥಗಳನು

ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ

ಯೈದಿದ ಮಧ್ವಮುನಿರಾಯಗಭಿವಂದಿಪೆ || ೨೫ ||


ಜಯ ಜಯತು ದುರ್ವಾದಿಮತತಿಮಿರ ಮಾರ್ತಾ೦ಡ

ಜಯಜಯತು ವಾದಿಗಜಪಂಚಾನನ

ಜಯಜಯತು ಚಾರ್ವಾಕಗರ್ವಪರ್ವತಕುಲಿಶ

ಜಯಜಯತು ಜಗನ್ನಾಥ ಮಧ್ವನಾಥ || ೨೬ ||


ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ

ಭಂಗವಿಲ್ಲದೆ ಸುಖವ ಸುಜನಕೆಲ್ಲ

ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ

ರಂಗವಿಠಲನೆಂದು ನೆರೆ ಸಾರಿರೈ || ೨೭ ||


ಫಲಶ್ರುತಿ (ಜಗನ್ನಾಥದಾಸ ವಿರಚಿತ)


ಸೋಮ ಸೂರ್ಯೋಪರಾಗದಿ ಗೋಸಹಸ್ರಗಳ

ಭೂಮಿದೇವರಿಗೆ ಸುರನದಿಯ ತಟದಿ

ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕು

ಈ ಮಧ್ವನಾಮ ಬರೆದೋದಿದರ್ಗೆ || ೧ ||


ಪುತ್ರರಿಲ್ಲದವರು ಸತ್ಪುತ್ರರೈದುವರು

ಸರ್ವತ್ರದಲಿ ದಿಗ್ವಿಜಯವಹುದು ಸಕಲ

ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು

ಸೂತ್ರನಾಮಕನ ಸಂಸ್ತುತಿ ಮಾತ್ರದಿ || ೨ ||


ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ

ತಾಪಕಳೆದಖಿಲ ಸೌಖ್ಯವನೀವುದು

ಶ್ರೀಪತಿ ಜಗನ್ನಾಥವಿಠಲನ ತೋರಿ ಭವ

ಕೂಪಾರದಿಂದ ಕಡೆ ಹಾಯಿಸುವುದು || ೩ ||


(ರಾಗ – ಸೌರಾಷ್ಟ್ರ, ಆದಿತಾಳ)

Comments

Popular posts from this blog

Sri Subrahmanya Ashtottara Shatanamavali in Telugu Lyrics Online free

Sri Vishnu Sahasranama Stotram in Telugu Lyrics

Sri Subrahmanya Ashtottara Shatanamavali in Kannada